ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿ
ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ
ಮುದ್ದಾದ ಕಣ್ಣಿಗೊಂದು
ಪುಟ್ಟ ಆ ಕೆನ್ನೆಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ
ಮಾಯಾವಿ ಮಿನುಗು ನೀನು
ಮುಂಜಾನೆ ಬಿಸಿಲು ನೀನು
ಸಾಲದಿರೋ ಹಾಡು ನೀನು
ಬೇಕೆನಿಸೋ ಸಂಜೆ ನೀನು
ಎದೆಯ ಧ್ವನಿಗೆ
ಬೆಳಕು ನೀನೆ
ನೀನಾದೆ ನೀನಾದೆ
ಯಾರಿರದ ರಸ್ತೆಯಲ್ಲಿ
ಸಂತೈಸೋ ಅವಳೇ ಗಾಳಿ
ಸಾಗರದ ಬಾನಿನಲ್ಲಿ
ಕಂಗೊಳಿಸೋ ಅವಳೆ ನೀಲಿ
ಸಮಯಾ ನೀ ನಿಂತೋದೆ
ಅವಳ ಅಂಗೈಯಲ್ಲೇ
ನಾನೂನು ಶರಣಾದೆ
ಅವಳ ಗುಂಗಿನಲ್ಲೇ
ಸೋತೆ ಹೋದೆ ಸೋತೆ ಹೋದೆ. ಸೋ…ತೇ ಹೋದೆ
ನೀ ಮೊದಲಾ ಕೊನೆಯಾ ಆಸೆ
ನನ್ನ ಎದೆಗೆ ಹಿಡಿಸೋ ಭಾಷೆ
ಅನುರಾಗದಲಿ ಕೊನೆಬೀದಿಯಲಿ
ನನಗೂ ನಿನಗೂ.. ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ?
ಕಿಟಕೀಲೆ ನಾ… ಕಾದೆ
ಯಾರೋ ನಾ ಯಾರೋ ಕನಸಲ್ಲಿ ಯಾರೂ ಇರದಾಗಾ
ನನ್ನವಳ ಮನಸಲ್ಲಿ ನನಗೇ ಬೇಕಿತ್ತು ಜಾಗ
ಈ ಹೃದಯ ಮೌನ ಆಗುವಾಗ
ಮಾತು ಹೇಗೇ ಆಡಲಿ
ಹುಡುಕಿ ಹೋದೆ ಎಲ್ಲೋ ದೂಡಿ
ನೀನೇ ಸಿಕ್ಕ ಶಾಯರಿ
ಸೋತೆ ಹೋದೆ ಸೋತೆ ಹೋದೆ.. ಸೋ…ತೆ ಹೋದೆ
ನೀ ಮೊದಲಾ ಕೊನೆಯಾ ಆಸೆ
ನನ್ನ ಎದೆಗೆ ಹಿಡಿಯೋ ಭಾಷೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ